ಕನ್ನಡಿಗರು ಉತ್ಕಟ ಜಾತಿ ಪ್ರೇಮಿಗಳಾ?
ಹೌದೆನ್ನುತ್ತದೆ ಇತ್ತಿಚಿನ ಒಂದು ಸಮಿಕ್ಷೆ ಎಂದು ಯಾವುದಾದರು ಒಂದು ಪತ್ರಿಕೆ ಬರೆದರೆ ನಿವು ಹೇಗೆ ಪ್ರತಿಕ್ರಿಯಿಸುತ್ತಿರಿ? ಸಿಟ್ಟ್ ಬರುತ್ತಾ? ಇಲ್ಲಾ "ಹೌದು ಅಂತ ಕಾಣ್ಸುತ್ತೆ " ಅಂತ ನಿಮ್ಮ ಒಳಮನಸ್ಸು ಪಿಸುಗುಡುತ್ತಾ? ಯಾಕೆಂದರೆ ಉತ್ತರಪ್ರದೇಶ ಮತ್ತು ಬಿಹಾರ ಬಿಟ್ರೆ ಈ ದೇಶದಲ್ಲಿ ಜಾತಿಯ ಬಗ್ಗೆ ಅತಿ ಹೆಚ್ಚು ವ್ಯಾಮೊಹ ಇರೊದು, ಬಹಿರಂಗವಾಗಿ ರಾಜಕೀಯದಲ್ಲಿ ಬಳಕೆಯಾಗ್ತಾ ಇರೋದು ಕರ್ನಾಟಕದಲ್ಲಿ ಮಾತ್ರ ಎಂದು ಅಧಿಕಪ್ರಸಂಗಿಯ ಅಭಿಪ್ರಾಯ.
ಮಾತೆತ್ತಿದರೆ ಒಕ್ಕಲಿಗರು,ಲಿಂಗಾಯಿತರು,ಕುರುಬರು,ವಿರಶೈವರು, ಬ್ರಾಹ್ಮಣರು ಮತ್ತು ಇತರರು ಎಂದು ತಮ್ಮನ್ನೆ ಬೆರ್ಪಡಿಸಿಕೊಂಡು ಕನ್ನಡಿಗರನ್ನು ಬೆರ್ಪಡಿಸುವ ಜಾತ್ಯಾತೀತ ರಾಜಕಾರಣಿಗಳಿಂದ ಕನ್ನಡಿಗರ ಒಗ್ಗಟ್ಟಿಗೆ ಧಕ್ಕೆಯಾಗುತ್ತಿದೆ. ಒಂದಡೆ ಅನ್ಯಭಾಷಿಕರ ವಲಸೆಯ ಹಾವಳಿ, ಇನ್ನೊಂದಡೆ ಕರ್ನಾಟಕದ ರಾಷ್ಟ್ರಿಯ ಪಕ್ಷಗಳು ಭಾಷೆ ,ರಾಜ್ಯದ ಬಗ್ಗೆ ತೊರುತ್ತಿರುವ ಅಸಡ್ದೆಯಿಂದಾಗಿ ಕನ್ನಡಿಗರು ನಲುಗಿ ಹೊಗಿದ್ದಾರೆ. ಇನ್ನು ಈ ಜಾತ್ಯಾತೀತ ರಾಜಕಾರಣಿಗಳು ನಮ್ಮನ್ನು ಜಾತಿ ತೋರಿಸಿ ಒಡೆದರೆ ಕರ್ನಾಟಕವನ್ನು ಕಾಪಾಡುವವರು ಯಾರು?
ಎಳಿ ಕನ್ನಡಿಗರೆ, ಎದ್ದೇಳಿ... ನಿಮ್ಮ ಜಾತಿ ಪ್ರೇಮವನ್ನು ಬದಿಗಿಟ್ಟು ಕರ್ನಾಟಕದ ಒಳಿತಿನ ಬಗ್ಗೆ ಚಿಂತಿಸಿ (ಕನ್ನಡವೆ ಜಾತಿ, ಕನ್ನಡವೆ ಧರ್ಮ ಎನ್ನುವ ಕನ್ನಡಿಗರಿಗೆ ನನ್ನ ನಮನ)
ಇಂತಿ ನಿಮ್ಮ ಪ್ರೀತಿಯ ....
ಅಧಿಕಪ್ರಸಂಗಿ
Tuesday, March 18, 2008
Subscribe to:
Posts (Atom)